ಬ್ರೇಕಿಂಗ್ ನ್ಯೂಸ್: ರಫೇಲ್ ಒಪ್ಪಂದ: ಮೋದಿ ಬೆಂಬಲಕ್ಕೆ ನಿಂತ ಎನ್‌ಸಿಪಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ರಕ್ಷಣಾ ಸಚಿವರು..!!!ಮೋದಿಯ ಬೆಂಬಲಕ್ಕೆ ನಿಂತವರು ಯಾರು...???

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉದ್ದೇಶಗಳ ಬಗ್ಗೆ ಜನರಿಗೆ ಯಾವುದೇ ಅನುಮಾನವಿಲ್ಲ ಎಂದು ಹೇಳಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತ ತಾಂತ್ರಿಕ ವಿವರಗಳನ್ನು ಬಹಿರಂಗಗೊಳಿಸಬೇಕೆಂಬ ವಿಪಕ್ಷಗಳ ಬೇಡಿಕೆಗೆ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ಒಂದು ವೇಳೆ ಯುದ್ಧವಿಮಾನಗಳ ಬೆಲೆಯನ್ನು ಬಹಿರಂಗಗೊಳಿಸಿದರೂ ಅದರಿಂದ ಯಾವುದೇ ತೊಂದರೆಯಾಗದು ಎಂದು ಮರಾಠಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾಜಿ ರಕ್ಷಣಾ ಸಚಿವ ಪವಾರ್ ಅಭಿಪ್ರಾಯಪಟ್ಟರು. ಈ ವಿಷಯದಲ್ಲಿ ಸರಕಾರದ ನಿಲುವಿನ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಜನರ ಮನದಲ್ಲಿ ಗೊಂದಲ ಹುಟ್ಟಿಸಿತು. ಇದೀಗ ನಿರ್ಮಲಾ ಅವರ ಬದಲು ವಿತ್ತ ಸಚಿವ ಅರುಣ್ ಜೇಟ್ಲಿ ಸರಕಾರದ ನಿಲುವಿನ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದಾರೆ ಎಂದು ಪವಾರ್ ಹೇಳಿದರು.

Comments