ಬ್ರೇಕಿಂಗ್ ನ್ಯೂಸ್: ಕುಮಾರಸ್ವಾಮಿಯವರ ಸಂಪುಟ ಸೇರುವವರ ಪಟ್ಟಿ ಇಲ್ಲಿದೆ ನೋಡಿ..???

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿದ್ದು, ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 'ಅಕ್ಟೋಬರ್ 10ರೊಳಗೆ ಸಂಪುಟ ವಿಸ್ತರಣೆ ಮಾಡುವುದು ಖಚಿತ' ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಘೋಷಣೆ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 7 ಸಚಿವ ಸ್ಥಾನಗಳು.
7 ಸ್ಥಾನಗಳ ಪೈಕಿ ಕಾಂಗ್ರೆಸ್‌ ಪಕ್ಷಕ್ಕೆ 6, ಜೆಡಿಎಸ್ ಪಕ್ಷಕ್ಕೆ ಒಂದು ಸ್ಥಾನ ಹಂಚಿಕೆಯಾಗಲಿದೆ. ಅಕ್ಟೋಬರ್ 8 ರಂದು ಮಹಾಲಯ ಅಮಾವಾಸ್ಯೆ ಇದ್ದು ಬಳಿಕ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯುವುದು ಖಚಿತವಾಗಿದೆ.

ಸಂಪುಟಕ್ಕೆ ಶಾಸಕರನ್ನು ಸೇರಿಸಿಕೊಳ್ಳಲು ಹಲವು ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಲೋಕಸಭೆ ಚುನಾವಣೆ, ಪ್ರಾದೇಶಿಕತೆ ಮತ್ತು ಜಾತಿ ಮಾನದಂಡವಾಗಿಟ್ಟು ಶಾಸಕರನ್ನುಆಯ್ಕೆ ಮಾಡಲಾಗುತ್ತದೆ. ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್ ಮತ್ತು ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದೆ.
ಶಾಸಕರ ಪಟ್ಟಿ:

* ಎಂ.ಬಿ.ಪಾಟೀಲ್ (ಬಬಲೇಶ್ವರ) (ಲಿಂಗಾಯತ)
* ಸಿ.ಎಸ್.ಶಿವಳ್ಳಿ (ಕುಂದಗೋಳ) (ಕುರುಬ)
* ಬಿ.ಎಸ್.ಪಾಟೀಲ್ (ಹಿರೇಕೆರೂರ) (ಸಾಧು ಲಿಂಗಾಯತ)
* ಈ.ತುಕಾರಾಂ (ಸಂಡೂರು) (ವಾಲ್ಮೀಕಿ)
* ಬಿ.ಕೆ.ಸಂಗಮೇಶ್ವರ (ಭದ್ರಾವತಿ) (ಪಂಚಮಸಾಲಿ ಲಿಂಗಾಯತ) ಹೆಸರು ಮುಂಚೂಣಿಯಲ್ಲಿದೆ.

Comments