ಸ್ಪೋಟಕ ಸುದ್ದಿ: ಮೋದಿಯವರನ್ನು, ಶರದ್ ‌ಪವಾರ್ ಬೆಂಬಲಿಸಿದ್ದಕ್ಕೆ ಎನ್.ಸಿ.ಪಿ ಪಕ್ಷ ತೊರೆದ ಪ್ರಭಾವಿ ಸಂಸದ...!!!ಕಾರಣ ಗೊತ್ತಾ...??

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ನಾಯಕ ತಾರೀಕ್ ಅನ್ವರ್ ತಮ್ಮ ಸಂಸದ ಸ್ಥಾನಕ್ಕೆ ಹಾಗೂ ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರವಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ವ್ಯಕ್ತಪಡಿಸಿದ ನಿಲುವು ವಿರೋಧಿಸಿ ಈ ನಿರ್ಧಾರ ಮಾಡಿದ್ದಾರೆ. ಬಿಹಾರದಲ್ಲಿರುವ ಎನ್ ಸಿಪಿಯ ಏಕೈಕ ಸಂಸದ ತಾರೀಕ್ ಅನ್ವರ್. ವಿರೋಧ ಪಕ್ಷಗಳು ಒಟ್ಟಾಗಿ ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆ ಆಗ್ರಹಿಸುವ ಸನ್ನಿವೇಶದಲ್ಲಿ ಶರದ್ ಪವಾರ್ ಅವರು ಮೋದಿಯನ್ನು ಬೆಂಬಲಿಸಿ ನೀಡಿದ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುದ್ಧ ವಿಮಾನ ಖರೀದಿಯ ತಾಂತ್ರಿಕ ಮಾಹಿತಿ ಬಹಿರಗ ಮಾಡಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯ ವಿವೇಕಯುತವಾದದ್ದಲ್ಲ ಎಂದು ಮರಾಠಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶರದ್ ಪವಾರ್ ಹೇಳಿದ್ದರು. "ಮೋದಿ ಉದ್ದೇಶದ ಬಗ್ಗೆ ಜನರು ವೈಯಕ್ತಿಕವಾಗಿ ಅನುಮಾನ ಪಟ್ಟಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಸಂಸ್ಥಾಪಕ ಸದಸ್ಯರ ಪೈಕಿ ಅನ್ವರ್ ಕೂಡ ಒಬ್ಬರು. "ಇಂಥ ಸನ್ನಿವೇಶದಲ್ಲಿ ಪಕ್ಷದಲ್ಲಿ ಮುಂದುವರಿಯುವುದಿಲ್ಲ" ಎಂದು ಅವರು ಹೇಳಿದ್ದಾರೆ. ಫ್ರಾನ್ಸ್ ನ ಡಸಾಲ್ಟ್ ಕಂಪನಿ ಜತೆಗೆ ನಡೆಸಿರುವ ಯುದ್ಧ ವಿಮಾನ ಖರೀದಿ ವ್ಯವಹಾರದಲ್ಲಿ ವೈಯಕ್ತಿಕ ಲಾಭಗಳಿವೆ. ಇದರಲ್ಲಿ ಸಂಶಯ ಪಡುವಂಥ ಅಂಶಗಳಿವೆ. ಆದರೆ ಪವಾರ್ ಹೇಳಿಕೆ ಮೋದಿಗೆ ಬೆಂಬಲದಂತೆ ಇದೆ. ಆದ್ದರಿಂದ ಪಕ್ಷ ತೊರೆಯಲು ನಿರ್ಧರಿಸಿದೆ ಎಂದಿದ್ದಾರೆ.
ಐದು ಅವಧಿಗೆ ಲೋಕಸಭೆ ಸದಸ್ಯರಾಗಿ ಹಾಗೂ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಅನ್ವರ್ ಆಯ್ಕೆ ಆಗಿದ್ದಾರೆ. "ಭಾರತದ ಸೂಚನೆ ಮೇರೆಗೆ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಡಸಾಲ್ಟ್ ನ ಭಾಗೀದಾರ ಆಗಿ ಮಾಡಲಾಯಿತು ಎಂಬ ಫ್ರೆಂಚ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಒಲಾಂಡ್ ಹೇಳಿಕೆ ಹಿನ್ನೆಲೆಯಲ್ಲಿ ಸರಕಾರವು ತಾನು ಶುದ್ಧ ಹಸ್ತ ಎಂದು ಸಾಬೀತು ಮಾಡಬೇಕು" ಎಂದಿದ್ದಾರೆ ಅನ್ವರ್.

ತಾರೀಕ್ ಅನ್ವರ್ ಮುಂದಿನ ಹಾದಿ ಏನು ಎಂಬ ಬಗ್ಗೆ ಇನ್ನೂ ಖಾತ್ರಿ ಆಗಿಲ್ಲ. ಆದರೆ ಶರದ್ ಪವಾರ್ ಜತೆಗೆ ಸೇರಿ ಕಾಂಗ್ರೆಸ್ ಬಿಟ್ಟು ಹೊರಬಂದಿದ್ದ ಅನ್ವರ್, ವಾಪಸ್ ಕಾಂಗ್ರೆಸ್ ಗೆ ಹೋಗಬಹುದು ಎಂಬ ನಿರೀಕ್ಷೆಯಿದೆ. ಕಾಂಗ್ರೆಸ್ ತೊರೆಯುವ ಮುನ್ನ ಆ ಪಕ್ಷದ ಹಲವು ಪ್ರಮುಖ ಹುದ್ದೆಗಳಲ್ಲಿ ತಾರೀಕ್ ಅನ್ವರ್ ಕಾರ್ಯ ನಿರ್ವಹಿಸಿದ್ದರು.

Comments