ಸ್ಪೋಟಕ ಸುದ್ದಿ: ಫೇಸ್‌ಬುಕ್‌ ಜನಕ ಮಾರ್ಕ್ ಜುಕರ್‌ಬರ್ಗ್‌ ಫೇಸ್‌ಬುಕ್‌ ಅಕೌಂಟ್‌ ನಾಳೆ ಡಿಲೀಟ್‌....??

ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿರುವ ಫೇಸ್‌ಬುಕ್‌ ಸುರಕ್ಷಿತ, ಹ್ಯಾಕ್‌ ಆಗದು ಎಂದು ಅದರ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರು ಹೇಳಿಕೊಳ್ಳುತ್ತಾರೆ. ಆದರೆ ಇದೀಗ ತೈವಾನ್‌ನ ವ್ಯಕ್ತಿಯೊಬ್ಬ ಮಾರ್ಕ್ ಜುಕರ್‌ಬರ್ಗ್‌ ಅವರ ಫೇಸ್‌ಬುಕ್‌ ಖಾತೆಯನ್ನು ಭಾನುವಾರ ಡಿಲೀಟ್‌ ಮಾಡಿ, ಅದನ್ನು ನೇರ ಪ್ರಸಾರ ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾನೆ.

ಹಣಕ್ಕಾಗಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವ ಹಾಗೂ ಕಂಪನಿಗಳಿಗೆ ವೆಬ್‌ಸೈಟ್‌ನಲ್ಲಿನ ಭದ್ರತಾ ಲೋಪದೋಷ ತೋರಿಸಿ ಭರಪೂರ ಹಣ ಪಡೆಯುವುದನ್ನೇ ವೃತ್ತಿಯಾಗಿಸಿಕೊಂಡಿರುವ ಚಾಂಗ್‌ ಚಿ-ಯುವಾನ್‌ ಎಂಬಾತನೇ ಈ ಸವಾಲು ಒಡ್ಡಿರುವಾತ. ಇದನ್ನು ತನ್ನ ಫೇಸ್‌ಬುಕ್‌ ಪುಟದಲ್ಲಿ ಆತ ಬರೆದುಕೊಂಡಿದ್ದಾನೆ.

ತಮ್ಮ ವೆಬ್‌ಸೈಟ್‌ಗಳು ಎಷ್ಟುಸುರಕ್ಷಿತವಾಗಿವೆ ಎಂಬುದನ್ನು ಪತ್ತೆ ಹಚ್ಚಲು ಕಂಪನಿಗಳು ಹ್ಯಾಕ್‌ ಮಾಡುವವರಿಗೆ ಬಹುಮಾನ ಘೋಷಣೆ ಮಾಡುತ್ತವೆ. ಹ್ಯಾಕರ್‌ಗಳು ಕಂಪನಿಯ ವಿವಿಧ ಪ್ರಕ್ರಿಯೆಗಳಲ್ಲಿ ಭಾಗಿಯಾದ ಬಳಿಕ ಹ್ಯಾಕ್‌ ಮಾಡಬಹುದು. ಆದರೆ ಅದನ್ನು ಬಹಿರಂಗಪಡಿಸುವಂತಿಲ್ಲ. ಆದರೆ ತೈವಾನ್‌ನ ಹ್ಯಾಕರ್‌ ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ.
2013ರಲ್ಲಿ ಜುಕರ್‌ಬರ್ಗ್‌ ಫೇಸ್‌ಬುಕ್‌ ಖಾತೆಯನ್ನು ಪ್ಯಾಲೆಸ್ತೀನ್‌ನ ಭದ್ರತಾ ತಜ್ಞನೊಬ್ಬ ಹ್ಯಾಕ್‌ ಮಾಡಿದ್ದ. ಫೇಸ್‌ಬುಕ್‌ನಲ್ಲಿ ಒಂದು ದೋಷವಿದೆ ಎಂದು ಕಂಪನಿಗೆ ವರದಿಗಳನ್ನು ಕಳುಹಿಸಿದ್ದೆ. ಉತ್ತರ ಬರಲಿಲ್ಲ. ಅದಕ್ಕಾಗಿ ಫೇಸ್‌ಬುಕ್‌ ಖಾತೆಯನ್ನೇ ಹ್ಯಾಕ್‌ ಮಾಡಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಹೇಳಿ ಸುದ್ದಿ ಮಾಡಿದ್ದ.

Comments