ಸ್ಫೋಟಕ ಸುದ್ದಿ: ಕಾಂಗ್ರೆಸ್ಸಿಗೆ ಕೈಕೊಟ್ಟು ಬಿಜೆಪಿಗೆ ಜೈ ಎಂದ 6 ಮಂದಿ ಪಕ್ಷೇತರರು.! ಬಿಜೆಪಿಗೆ ಒಲಿದು ಬರಲಿದೆ ಬಿಬಿಎಂಪಿ ಗದ್ದುಗೆ.!

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಚಿತ್ರವಿಚಿತ್ರ ನಡೆಯನ್ನು ಅನುಸರಿಸುತ್ತಿರುವಾಗಲೇ ಇತ್ತ ಬಿಬಿಎಂಪಿಯಲ್ಲಿ ಹೈಡ್ರಾಮ ನಡೆಯುತ್ತಿದೆ. ಬೆಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಚುನಾವಣಾ ಪ್ರಕ್ರಿಯೆ ನಾಳೆ ನಡೆಯಲಿದ್ದು ಕಾಂಗ್ರೆಸ್ ಬಹುತೇಕ ಗೆಲ್ಲುವ ಹುಮ್ಮಸ್ಸಿನಲ್ಲಿತ್ತು. ಆದರೆ ಕೊನೇಯ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟ ಪಕ್ಷೇತರ ಸದಸ್ಯರು ಬಿಜೆಪಿಗೆ ಜೈ ಎಂದಿದ್ದಾರೆ.
ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇಂದು ಸಭೆ ನಡೆದಿದ್ದು ಮೇಯರ್ ಆಯ್ಕೆಯ ಬಗ್ಗೆ ಚರ್ಚೆ ನಡೆದಿತ್ತು. 8 ಮಂದಿ ಪಕ್ಷೇತರ ಸದಸ್ಯರನ್ನು ನಂಬಿ ಅಧಿಕಾರದ ಗದ್ದುಗೆಗೆ ಏರಬಹುದು ಎಂಬ ಕನಸನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಕೊನೇ ಕ್ಷಣದಲ್ಲಿ ಇಬ್ಬರು ಪಕ್ಷೇತರ ಸದಸ್ಯರು ನಾಪತ್ತೆಯಾಗುತ್ತಾರೆ.

ಕೆಲವೇ ಕ್ಷಣಗಳಲ್ಲಿ ಸ್ಪೋಟಕ ಸುದ್ಧಿಯೊಂದು ಹೊರಬಿದ್ದಿದ್ದು ಈ ಪಕ್ಷೇತರ ಸದಸ್ಯರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂಬುವುದು ಬಯಲಾಗಿದೆ. 8 ಮಂದಿ ಪಕ್ಷೇತರ ಕಾರ್ಪೋರೇಟರ್ ಗಳಲ್ಲಿ 6 ಮಂದಿ ಕಾರ್ಪೋರೇಟರ್ ಗಳು ಬಿಜೆಪಿ ಪಾಲಾಗಿದ್ದು ಬಿಬಿಎಂಪಿ ಅಧಿಕಾರವನ್ನು ಬಿಜೆಪಿ ತನ್ನದಾಗಿರಸಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಕಾಪೋರೇಟರ್‍ಗಳಿಗೆ ಬಿಜೆಪಿ ಸ್ಥಾಯಿ ಸಮಿತಿಯಲ್ಲಿ ಸ್ಥಾನ ನೀಡುವ ಭರವಸೆಯನ್ನು ನೀಡಿದೆ ಎನ್ನಲಾಗಿದೆ.
ಈ ಮಧ್ಯೆ ಕಾಂಗ್ರೆಸ್ ಭಾರತೀಯ ಜನತಾ ಪಕ್ಷದ ವಿರುದ್ಧ ಹರಿಹಾಯ್ದಿದೆ. ಬಿಜೆಪಿ ಪಕ್ಷೇತರ ಕಾಪೋರೇಟರ್‍ಗಳನ್ನು ಕಿಡ್ನಾಪ್ ಮಾಡಿದೆ ಎಂದು ಆರೋಪಿಸಿದೆ. ಆದರೆ ಪಕ್ಷೇತರ ಸದಸ್ಯರು ತಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಜುಗರವಾಗಿದೆ.

Comments