ಬ್ರೇಕಿಂಗ್ ನ್ಯೂಸ್: ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯಿಂದ ಬಂತು ಪ್ರತಿಷ್ಠಿತ ಪ್ರಶಸ್ತಿ...!!!ಯಾವುದು ಆ ಪ್ರಶಸ್ತಿ...???

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಯಾದ 'ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿಗೆ ವಿಶ್ವಸಂಸ್ಥೆ ಆಯ್ಕೆ ಮಾಡಿದೆ.
ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಹತ್ತು ಹಲವು ಯೋಜನೆಗಳು ಮತ್ತು 2020 ರ ಹೊತ್ತಿಗೆ ಭಾರತದಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಉಪಯೋಗವನ್ನು ನಿಲ್ಲಿಸುವುದಕ್ಕೆ ನಿರ್ಧರಿಸಿರುವ ಅವರ ನಡೆಯನ್ನು ವಿಶ್ವಸಂಸ್ಥೆ ಶ್ಲಾಘಿಸಿದೆ. ಸೌರಶಕ್ತಿ ಬಳಕೆ ಮತ್ತು ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ದೇಶಗಳು ಒತ್ತು ನೀಡುತ್ತಿರುವುದನ್ನು ಮನಗಂಡ ವಿಶ್ವಸಂಸ್ಥೆ ಈ ಪ್ರಶಸ್ತಿಗೆ ಮೋದಿ ಅವರನ್ನು ಆರಿಸಿದೆ.
ಮೋದಿ ಅವರ ಹೆಸರಿನೊಂದಿಗೆ, ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಅವರ ಹೆಸರನ್ನೂ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ 73 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರದಾನ ಮಾಡಲಾಗುತ್ತದೆ.

Comments