ಚಿನ್ನ ಮತ್ತು ವಜ್ರದಿಂದಲೇ ಮಾಡಿದ ಶೂ : ಈ ಶೂ ಬೆಲೆ ಎಷ್ಟು ಗೊತ್ತಾ ? ಈ ಸುದ್ದಿ

ಸಾಮಾನ್ಯವಾಗಿ ನಾವು ಬಳಸುವ ಚಪ್ಪಲಿ ಮತ್ತು ಶೂಗಳ ಬೆಲೆ ಎಷ್ಟಿರಬಹುದು , 200,300  ರಿಂದ 1000-2000 ರೂ ಗಳ ಬೆಲೆಬಾಳುವ ಶೂ ಮತ್ತು ಚಪ್ಪಲಿಗಳನ್ನು ಬಳಸುತ್ತೇವೆ. ಆದರೆ ಇಲ್ಲೊಂದು ಶೂ ಇದೆ ಇದರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರ. ಇಷ್ಟಕ್ಕೂ ಈ ಶೂ ನಿರ್ಮಿಸಿರೋದು ವಜ್ರ ಮತ್ತು ಚಿನ್ನದಿಂದ ಅಂದರೆ ನಂಬ್ತೀರ ? ನಂಬಲೇಬೇಕು.ಚಿನ್ನ ಮತ್ತು ವಜ್ರಗಳನ್ನು ಬಳಸಿ ಈ ವಿಶೇಷ ಶೂ ತಯಾರಿಸಲಾಗಿದೆ. ಬೆಲೆಬಾಳುವ ವಸ್ತುಗಳನ್ನು ತಯಾರಿಸುವಲ್ಲಿ ,ಕೊಳ್ಳುವಲ್ಲಿ ದುಬೈ ಯಾವತ್ತೂ ಮುಂದು, ಈಗ ಕಂಪನಿಯೊಂದು ಪ್ರಪಂಚದ ಅತಿ ಹೆಚ್ಚು ಬೆಲೆ ಶೂಸ್ ತಯಾರಿಸಿದೆ. ಇಷ್ಟಕ್ಕೂ ಈ ಚಿನ್ನ ಮತ್ತು ವಜ್ರದಿಂದ ತಯಾರಿಸಿದ ಆ ಶೂಸ್ ಬೆಲೆ ಕೇಳಿದರೆ ನಿಮ್ಮ ತಲೆ ಗಿರ ಗಿರ ತಿರುಗುತ್ತೆ.



ಹೌದು, ಆ ಶೂಸ್ ನ ಬೆಲೆ ಬರೋಬ್ಬರಿ 123 ಕೋಟಿ ರೂ..! ಸದ್ಯ ದುಬೈನ ಬುರ್ಜ್ ಅಲ್ ಅರಬ್ ಹೋಟೆಲ್ ನಲ್ಲಿ ಈ ಶೂಗಳನ್ನು ಮಾರಾಟಕ್ಕಿಡಲಾಗಿದೆ.ದುಬೈನ ಪ್ರಖ್ಯಾತ ಚಪ್ಪಲ್ ಕಂಪೆನಿಯಾದ ಜಾದ ದುಬೈ ಈ ಪ್ರಪಂಚದಲ್ಲೇ ಅತಿ ಹೆಚ್ಚು ಬೆಲೆಬಾಳುವ ಜೋಡಿ  ಶೂಗಳನ್ನು ತಯಾರಿಸಿದೆ. ಈ ಶೂಗಳನ್ನು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲಾಗಿದ್ದು, ಇದರಲ್ಲಿ 15 ಕ್ಯಾರಟ್ ನ ಒಟ್ಟು 236 ವಜ್ರಗಳಿವೆ.
ಈ ಬೆಲೆಬಾಳುವ ಶೂಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು ಈ ಕಂಪನಿ 9 ತಿಂಗಳ ಕಾಲ ಸಮಯವನ್ನು ತೆಗೆದುಕೊಂಡಿದೆ. ಈ ಶೂಗಳ  ಬೆಲೆ ಕೇಳಿದರೇನೇ ತಲೆ ತಿರುಗುತ್ತೆ ಅಂದಹಾಗೆ ಈ ಶೂ  ಕೊಳ್ಳುವ ಆ ಮಾಹಾನುಭಾವರು ಯಾರೆಂದು ಕಾದುನೋಡಬೇಕು .ಚಿನ್ನದ ಉಂಗುರ ಹಾಕಿಕೊಳ್ಳಲು ಆಗದ ಎಷ್ಟೋ ಮಂದಿ ಈ ಚಿನ್ನದ ಶೂ ನೋಡಿ ಖುಷಿಪಡಬೇಕು ಅಷ್ಟೇ.. ಏನಂತೀರಾ ?

Comments