ವಿಶೇಷ ಸುದ್ದಿ: I Love India ಎಂದು ಸ್ನೇಹಿತ ಮೋದಿಯವರನ್ನು ನೆನೆದ ವಿಶ್ವದ ದೊಡ್ಡಣ್ಣ...!!!!ಟ್ರಂಪ್ ಮೋಡಿಯ ಕುರಿತು ಹೇಳಿದ್ದೆನು...???

"ಐ ಲವ್ ಇಂಡಿಯಾ, ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ನೆನೆಕೆಗಳು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಹೇಳಿಕಳಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾದಕ ದ್ರವ್ಯ ನಿರ್ಮೂಲನೆ ಕುರಿತು ಏರ್ಪಡಿಸಿದ್ದ ಸಾಮಾನ್ಯ ಸಭೆಗಾಗಿ ಅಮೆರಿಕದ ನ್ಯೂಯಾರ್ಕ್ ಗೆ ತೆರಳಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹಲವು ವಿದೇಶೀ ನಾಯಕರನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾದ ಡೊನಾಲ್ಡ್ ಟ್ರಂಪ್, 'ನನಗೆ ಭಾರತ ಎಂದರೆ ಬಹಳ ಇಷ್ಟ. ಐ ಲವ್ ಇಂಡಿಯಾ. ನನ್ನ ಸ್ನೇಹಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹಾರೈಕೆ ತಿಳಿಸಿ' ಎಂದರು.

ಟ್ರಂಪ್ ಅವರ ಈ ಮಾತಿಗೆ ಹಲವು ವಿದೇಶೀ ಗಣ್ಯರೂ ಸಾಕ್ಷಿಯಾದರು. ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಸ್ವರಾಜ್ ಅವರು ಟ್ರಂಪ್ ಗೆ ಹೇಳಿದಾಗ, ತಾವೂ ಮೋದಿ ಅವರಿಗೆ ಶುಭಾಶಯ ಕೋರುವುದಾಗಿ ಅವರು ಹೇಳಿದರು.

Comments