ಬ್ರೇಕಿಂಗ್ ನ್ಯೂಸ್: ನೊಬೆಲ್ ಪರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಮನಿರ್ದೇಶನ..!!!!

ವಿಶ್ವದ ಅತಿದೊಡ್ಡ ಸರ್ಕಾರಿ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಜಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು 2019ರ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನ ಮಾಡಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸಾಯ್ ಸೌಂದರರಾಜನ್ ಹೇಳಿದ್ದಾರೆ.

ತಮಿಳ್‌ಸಾಯ್ ಜೊತೆ ಪ್ರೊಫೆಸರ್ ಆಗಿರುವ ಅವರ ಪತಿ ಪ್ರೊ. ಡಾ.ಪಿ.ಸೌಂದರಾಜನ್ ಕೂಡಾ ಮೋದಿ ಹೆಸರನ್ನು ನಾಮ ನಿರ್ದೇಶನ ಮಾಡಿದ್ದಾರೆ.

'ನೊಬೆಲ್ ಪುರಸ್ಕಾರಕ್ಕಾಗಿ ಪ್ರತೀ ವರ್ಷದ ಸೆಪ್ಟೆಂಬರ್‌ನಲ್ಲಿ ನಾಮ ನಿರ್ದೇಶನ ಆರಂಭವಾಗಲಿದ್ದು, 2019ರ ಸಾಲಿನ ನೊಬೆಲ್ ನಾಮ ನಿರ್ದೇಶನಕ್ಕೆ 2019ರ ಜ.31 ಕೊನೆಯ ದಿನವಾಗಿದೆ.

Comments