ಬಿಗ್ ಬ್ರೇಕಿಂಗ್ ನ್ಯೂಸ್: 2019ರ ಲೋಕಸಭಾ ಚುನಾವಣೆಗೆ ಬಿ.ಜೆ.ಪಿ ಭರ್ಜರಿ ತಯಾರಿ..!!! ರಾಜ್ಯದ ಆಭ್ಯರ್ಥಿಗಳ ಪಟ್ಟಿ..???

2019ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕರ್ನಾಟಕ ಬಿಜೆಪಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಕ್ಟೋಬರ್‌ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಆರಂಭಿಸುವ ಸಾಧ್ಯತೆ ಇದೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭೆ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನುಗಳಿಸಬೇಕು ಎಂಬುದು ಪಕ್ಷದ ಗುರಿಯಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ, ಇನ್ನೂ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿ ಕ್ಷೇತ್ರಕ್ಕೂ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.
2014ರ ಲೋಕಸಭೆ ಚುನಾವಣೆಯಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ಖಚಿತ ಎಂಬ ಸುದ್ದಿ ಇದೆ. ಆದರೆ, ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣದಿಂದ ಸ್ಪರ್ಧೆ ಮಾಡಲಿದ್ದಾರೆಯೇ? ಕಾದು ನೋಡಬೇಕು...ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ....


ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ?

ಬೀದರ್ -ಭಗವಂತ ಖೂಬಾ
ರಾಯಚೂರು - ಕೆ.ಶಿವನಗೌಡ ನಾಯಕ್/ತಿಪ್ಪರಾಜು ಹವಾಲ್ದಾರ್
ಕಲಬುರಗಿ (ಎಸ್‌ಸಿ ಮೀಸಲು) -ಬಾಬೂರಾವ್ ಚಿಂಚನಸೂರು/ಕೆ.ರತ್ನಪ್ರಭಾ
ಬಳ್ಳಾರಿ (ಎಸ್‌ಟಿ ಮೀಸಲು) - ಜೆ. ಶಾಂತ
ಕೊಪ್ಪಳ - ಸಂಗಣ್ಣ ಕರಡಿ

ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳಾರು? 
ಚಿತ್ರದುರ್ಗ (ಎಸ್‌ಟಿ ಮೀಸಲು) - ಜನಾರ್ದನ ಸ್ವಾಮಿ/ಮಾದರ ಚೆನ್ನಯ್ಯ ಶ್ರೀಗಳು
ತುಮಕೂರು - ಸುರೇಶ್ ಗೌಡ/ಸೊಗಡು ಶಿವಣ್ಣ
ಬೆಂಗಳೂರು ದಕ್ಷಿಣ - ಅನಂತ್ ಕುಮಾರ್/ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ - ಡಿ.ವಿ.ಸದಾನಂದ ಗೌಡ/ಮುನಿರಾಜು
ಮೈಸೂರು-ಕೊಡಗು - ಪ್ರತಾಪ್ ಸಿಂಹ/ಯದುವೀರ್ ಒಡೆಯರ್

ಹಾಲಿ ಸಂಸದರಿಗೆ ಟಿಕೆಟ್ :
ದಾವಣಗೆರೆ - ಜಿ.ಎಂ.ಸಿದ್ದೇಶ್ವರ
ಉಡುಪಿ-ಚಿಕ್ಕಮಗಳೂರು - ಡಿ.ಎನ್.ಜೀವರಾಜ್/ಜಯಪ್ರಕಾಶ್ ಹೆಗಡೆ/ಡಿ.ವಿ.ಸದಾನಂದ ಗೌಡ
ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್
ಉತ್ತರ ಕನ್ನಡ - ಅನಂತ್ ಕುಮಾರ ಹೆಗಡೆ
ಬೆಳಗಾವಿ -ಸುರೇಶ್ ಅಂಗಡಿ
ಚಿಕ್ಕೋಡಿ-ಸದಲಗಾ - ರಮೇಶ್ ಕತ್ತಿ
ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್
ವಿಜಯಪುರ (ಎಸ್‌ಸಿ ಮೀಸಲು) - ರಮೇಶ್ ಜಿಗಜಿಣಗಿ
ಹಾವೇರಿ-ಗದಗ - ಶಿವಕುಮಾರ್ ಉದಾಸಿ
ಹುಬ್ಬಳ್ಳಿ-ಧಾರವಾಡ - ಪ್ರಹ್ಲಾದ್ ಜೋಶಿ
ಕೋಲಾರ (ಎಸ್‌ಸಿ ಮೀಸಲು) - ಡಿ.ಎಸ್.ವೀರಯ್ಯ
ಚಿಕ್ಕಬಳ್ಳಾಪುರ - ಬಿ.ಎನ್.ಬಚ್ಚೇಗೌಡ
ಶಿವಮೊಗ್ಗ - ಬಿ.ವೈ.ರಾಘವೇಂದ್ರ

Comments